Local NEWS

ಮಂಡ್ಯ|ಹಿಂದೂ ಹುಡುಗಿ, ಮುಸ್ಲಿಂ ಹುಡುಗ ಪ್ರೀತಿ, ಚಿನಕುರಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ, ಪೊಲೀಸ್ ಬಂದೋಬಸ್ತ್

ಪಾಂಡವಪುರ: ಮುಸ್ಲಿಂ ಯುವಕನ ಜೊತೆ ಹಿಂದೂ ಧರ್ಮಕ್ಕೆ ಸೇರಿದ ವಿದ್ಯಾರ್ಥಿನಿ ಪ್ರೀತಿಸಿ, ಮನೆ ಬಿಟ್ಟು ಹೋಗಿರುವ ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಘಟನೆ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ. ಚಿನಕುರಳಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತವಾಗಿ ಗ್ರಾಮದ ಮಸೀದಿ ಮುಂಭಾಗ, ಮುಸ್ಲಿಂ ಅಂಗಡಿಗಳು, ಸಂಬಂಧಪಟ್ಟ ಮನೆಗಳ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

ಚಿನಕುರಳಿ ಗ್ರಾಮದ ಎಸ್ ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಡಿಗ್ರಿ ವಿದ್ಯಾಬ್ಯಾಸ ಮಾಡುತ್ತಿದ್ದ ಒಕ್ಕಲಿಗ ಜನಾಂಗಕ್ಕೆ ಸೇರಿದ 18 ವರ್ಷ ತುಂಬಿದ್ದ ವಿದ್ಯಾರ್ಥಿನಿಯೊಬ್ಬಳು, ಇದೇ ಗ್ರಾಮದಲ್ಲಿ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಧರ್ಮಕ್ಕೆ ಸೇರಿದ ಯುವಕ ಮುದಾಸಿನ್ ಪಾಷ ಜೊತೆ ಕಳೆದ ಸೋಮವಾರ ಮನೆಯಿಂದ ಹೋಗಿದ್ದಾರೆ ಸಂಜೆಯಾದರೂ ವಾಪಸ್ಸು ಮನೆಗೆ ಬಂದಿರಲಿಲ್ಲ. ಈಕೆಯ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಆದ್ದರಿಂದ ಮುದಾಸಿನ್ ಪಾಷ ಕಾಣೆಯಾಗಿದ್ದರಿಂದ, ಈತನ ಜೊತೆ ಓಡಿ ಹೋಗಿರಬಹುದು ಎಂದು ಅರ್ಥೈಸಲಾಗಿದೆ.

ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗ ಪ್ರೀತಿಸಿ ಪರಾರಿಯಾಗಿರುವ ಘಟನೆ ಸಂಬಂಧ ಲವ್ ಜಿಹಾದ್ ಎಂಬ ಸುದ್ದಿ ಕೇಳಿ ಬರುತ್ತಿದ್ದ ಹಿನ್ನೆಲೆ ಮುಸ್ಲಿಂ ಹುಡುಗನ ಕುಟುಂಬಸ್ಥರ ಮನೆ, ಮಸೀದಿಗೆ ಮುಂಜಾಗೃತವಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹುಡುಗಿಯ ಪೋಷಕರು ಹಾಗೂ ಗ್ರಾಮಸ್ಥರು ಮುಸ್ಲಿಂ ಯುವಕನನ್ನು ಕರೆಸಬೇಕು ಎಂದು ಪಟ್ಟು ಹಿಡಿದು, ಗ್ರಾಮದಲ್ಲಿ ಒತ್ತಾಯಿಸಿದ್ದಾರೆ. ಚಿನಕುರಳಿ ಗ್ರಾಮದಲ್ಲಿ ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗ ಪ್ರೀತಿಸಿ ಕರೆದೋಯ್ದಿರುವ ಪ್ರಸಂಗ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಲವ್ ಜಿಹಾದ್ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಘಟನ ಸಂಬಂಧ ಹಿಂದೂ ಹುಡುಗಿ‌ ಕಾಣೆಯಾಗಿದ್ದಾಳೆ ಎಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Poco-X7-Pro

Leave a Reply

Your email address will not be published. Required fields are marked *