Local NEWS

ಉತ್ತರ ಕನ್ನಡ | ಹೊಲದ ಕೆಲಸ ಮುಗಿಸಿ ಮನೆಗೆ ತೆರಳುವಾಗ ರೈತನ ಮೇಲೆ ಕರಡಿ ದಾಳಿ

ಜೋಯಿಡಾ ತಾಲ್ಲೂಕಿನ ರಾಮನಗರದ ಹನುಮಾನ ಗಲ್ಲಿಯ ರೈತ ಮಾರುತಿ ಮಳೇಕರ 45ವರ್ಷ ಪ್ರಾಯ ಎಂಬುವವರು ಹೊಲದಿಂದ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಕರಡಿದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಸಂಭವಿಸಿದೆ. ಗಾಯಾಳುವಿಗೆ ರಾಮನಗರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆಗೆ ರವಾನಿಸಲಾಗಿದೆ.  ಮಾರುತಿ ಮಳೇಕರ (45) ಸಿರಗಾಂವ ಗ್ರಾಮ ಪಂಚಾಯತ ಪ್ರದೇಶದ ನಾನೆಗಾಳಿಯಲ್ಲಿರುವ ನಿವಾಸಿ ಆಗಿದ್ದಾರೆ.

ತನ್ನ ಹೊಲದಲ್ಲಿ ಇಡೀ ದಿನ ದುಡಿದು ರಾಮನಗರದ ಹನುಮಾನ ಗಲ್ಲಿಯ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ತನ್ನ ಹೊಲದಿಂದ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕರಡಿ ಹಠಾತ್ತನೆ ದಾಳಿ ನಡೆಸಿ, ತಲೆಗೆ ಗಂಭೀರವಾಗಿ ಗಾಯಗೊಳಿಸಿದ್ದು, ಕೈ ಹಾಗೂ ಕಾಲುಗಳಿಗೆ ಸಹ ಬಲವಾಗಿ ಗಾಯಗೊಳಿಸಿದೆ.

ಗಾಯಾಳು ದಾಳಿಯ ಸಂದರ್ಭದಲ್ಲಿ ಕರಡಿಯೊಂದಿಗೆ ಕಾದಾಡಿ, ತಪ್ಪಿಸಿಕೊಂಡು ಬಂದಿದ್ದಾನೆ. ಕರಡಿ ಯಿಂದ ದಾಳಿಗೆ ಒಳಗಾಗಿ ರಕ್ತದ ಮಡುವಿನಲ್ಲಿ ಇದ್ದರು ತನ್ನ ಮನೆಯವರೆಗೆ ಸುಮಾರು 4 ಕಿ. ಮೀ. ದೂರ ನಡೆದುಕೊಂಡು ಹೋಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

Leave a Reply

Your email address will not be published. Required fields are marked *